ಬಾಲು ಈ ಬಾರಿ ನಿಮಗೆ ಒಂದು ಅಪರೂಪದ ಕಲ್ಲು ತೋರಿಸ್ತೀನಿ ಅಂತ ಅಂದ್ರು ,
ನಂಗೆ ತುಂಬಾ ಕುತೂಹಲ !!
ಹೋಗ್ತೀರೋದು ಕಗ್ಗಾಡಿಗೆ.. ಅಲ್ಲಿ ಈ ಅಸಾಮಿ ಏನು ತೋರಿಸ್ತಾರೋ ಏನೋ ಅಂತ !
ಬುರುಡೆ ಅರಣ್ಯದಿಂದ ಬೆಳಗ್ಗೆನೆ ಹೊರಟೆವು, ದಟ್ಟಾರಣ್ಯದ ದಾರಿ ಸವೆದು ಮೇಲೆಬಂದರೆ
ಅಲ್ಲೇ ಒಂದು ಬಿರ್ಲಾ ರವರ ಕಾಫಿ ಎಸ್ಟೇಟ್ ,
ಈ ಟಾಟಾ, ಬಿರ್ಲಾ ರವರು ಎಲ್ಲೆಲ್ಲೋ ಅಸ್ತಿ ಮಾಡಿ ಇಟ್ಟಿದ್ದಾರೆ ಮಾರಾಯ್ರೆ ,
ಎಸ್ಟೇಟ್ ದಾಟಿ ಹಾಗೆ ಮೇಲೆ ಬಂದರೆ ಸಿಗುವುದೇ ಹೊನ್ನಮೇಟಿ ಬೆಟ್ಟ.
ಕಲ್ಲನ್ನು ಜೋರಾಗಿ ಕುಟ್ಟಿದಾಗ ಹೊರ ಹೊಮ್ಮುತ್ತದೆ ಥರಾವರಿ ನಾದ ,
ನಿಸರ್ಗವೇ ಹಾಗೆ, ತನ್ನ ಗರ್ಭದಲ್ಲಿ ಎಷ್ಟೋ ಅಚ್ಚರಿಗಳನ್ನು ತುಂಬಿ ಕೊಂಡಿರುತ್ತದೆ ಅಲ್ವಾ?
ಇಲ್ಲಿ ನೋಡಿ , ದಟ್ಟಾರಣ್ಯ ಮಧ್ಯದಲ್ಲಿ ಒಂದು ನಿಸರ್ಗದ ವಿಸ್ಮಯ ,
ಹಾಗೆ ನೋಡಿದರೆ ಸುತ್ತ ಮುತ್ತಲೂ ಹಲವಾರು ಕಲ್ಲುಗಳಿವೆ , ಅವುಗಳಿಗೆ ಇಲ್ಲ ಈ ಭಾಗ್ಯ .
ಹಂಪಿಯ ವಿಜಯ ವಿಠಲ ದೇವಸ್ಥಾನದ "ಸರಿಗಮಪ" ಕಂಬಗಳು ನೆನಪಿಗೆ ಬರುತ್ತವೆ
ಕಲ್ಲಿಗೆ ಹೇಗೆ ಬಂತು ಈ ಗುಣ ಎಂದು ಅಂತರ್ಜಾಲ ತಾಕಿಸಿದಾಗ ಸಿಕ್ಕಿದ್ದು ಇಷ್ಟು.
ಕೆಲವು ಬಗೆಯ "granite" ಗಳಿಗೆ ಈ ಗುಣ ಇರುತ್ತದೆಂದು ,
ಈ ಕಲ್ಲನ್ನು ಒಂದು ನಿರ್ದಿಷ್ಟ ಬಗೆಯಲ್ಲಿ ತಾಕಿಸಿದಾಗ , ತರಂಗಗಳು ಹೊರಹೊಮ್ಮುತ್ತದೆಂದು ತಿಳಿಯಿತು.
ಬಾಕಿ ಕಲ್ಲಿನ ತನಕ ಚಾರಣ ಮಾಡಬೇಕು,
ಸ್ವಂತ ಗಾಡಿ ಇದ್ರೆ ಒಳ್ಳೇದು ,
ಸಾಧ್ಯವಾದರೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋದಾಗ ಇಲ್ಲಿಯೂ ಒಮ್ಮೆ ಭೇಟಿ ಕೊಡಿ.
ಒಳ್ಳೆಯ ಮಾಹಿತಿ..ಹಾಗು ಚಂದದ ಬರವಣಿಗೆ...ಮನಸಿಗೆ ಮುದ ಕೊಡುವ ಶೈಲಿ..ತುಂಬಾ ಇಷ್ಟ ಆಯಿತು..
ReplyDeleteಈ ಜಾಗದ ಬಗ್ಗೆ ಮಾಹಿತಿ ನನಗೆ ತಿಳಿಸಿದರೆ ನಾನು ನಿಮಗೆ ಚಿರ ಋಣಿ
srmanjun@gmai.com
Very informative... thanks for sharing sir :)
ReplyDeleteಸರ್,
ReplyDeleteಉಪಯುಕ್ತ ಮಾಹಿತಿಗೆ ಧನ್ಯವಾದಗಳು. ಫೋಟೊಗಳು ಮತ್ತು ಅದರ ಬಗೆಗಿನ ನೇರ ವಿವರಣೆಗಳು ಚೆನ್ನಾಗಿವೆ...
nice
ReplyDelete@ ಶ್ರೀಕಾಂತ್ . @ ಮಾನಸ , @ ಶಿವು . ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು . ಹೀಗೆಯೇ ಪ್ರೋತ್ಸಾಹ ಇರಲಿ.
ReplyDelete@ ಶ್ರೀಕಾಂತ್ : ಇದು ಬಿಳಿಗಿರಿರಂಗನ ಬೆಟ್ಟದ ಹತ್ತಿರ ಇದೆ. ಹೇಳಿದ ಹಾಗೆ, ಎಸ್ಟೇಟ್ ತನಕ ಯಾವಾಗಲೋ ದಿನಕ್ಕೆ ಒಮ್ಮೆ ಬಸ್ಸು ಬಂದು ಹೋಗುತ್ತದೆ. ಸ್ವಂತ ಗಾಡಿ ಇದ್ದರೆ ಒಳ್ಳೆಯದು.
@ ಸೀತಾರಾಮ ಸರ್ , ಧನ್ಯವಾದಗಳು, ಹೀಗೆಯೇ ಪ್ರೋತ್ಸಾಹ ಇರಲಿ.
ReplyDeleteನಿಮ್ಮದು ಗಣಿ ಇಲಾಖೆ ಅದ್ದರಿಂದ ಒಂದು ಪ್ರಶ್ನೆ :-)
ಎಲ್ಲ granite ಗಳು ಈ ರೀತಿ ಇರೋದಿಲ್ವ ಅಲ್ವಾ ? ನಮ್ಮ ಕರ್ನಾಟಕ ದಲ್ಲಿ ಈ ತರಹದ ಕಲ್ಲುಗಳು ದೊರೆತಿರುವದಕ್ಕೆ ಏನಾದ್ರು ಪುರಾವೆ ಗಳು ಇದೆಯಾ ?
nice photography and excellent information.
ReplyDelete@ ಕೊಳಲು : ಪ್ರೋತ್ಸಾಹಕ್ಕೆ ಧನ್ಯವಾದಗಳು
ReplyDeleteದೀಪ್ ರವರೆ, ನಾನು ನಿಮ್ಮ ಬ್ಲಾಗನ್ನು ಇತ್ತೀಚೆಗಷ್ಟೇ ಓದಿದ್ದು, ಬಹಳ ಚೆನ್ನಾಗಿ ಬರೆದಿದ್ದೀರ. ನಿಮಗೆ ನನ್ನ ಅಭಿನಂದನೆಗಳು.
ReplyDeleteನಾವು ನಮ್ಮ ಸ್ವಂತ ಗಾಡಿಯಲ್ಲಿ ಹೊನಮೇಟಿಗೆ ಹೋಗುವುದಾದರೆ, ಯಾವ ರಸ್ತೆಯಲ್ಲಿ ಹೋಗಬೇಕಾಗುತ್ತದೆ? ಆಲ್ಲಿ ತಂಗಲು ಯಾವುದಾದರು ಸ್ಠಳವಿದೆಯೇ?
@Hemmige..Dhanyavadagalu ..
ReplyDeleteಬಸ್ ವ್ಯವಸ್ಥೆ 'ಪುಂಜುರಿನ ತನಕ ಇರಬಹುದು.. ಅಲ್ಲಿಂದ ಬೇರೆ ವಾಹನ ಬೇಕು..
ವಾಹನದಲ್ಲಿ ಹೋಗಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಬೇಕು..