Sunday, March 20, 2011

ಕಗ್ಗಾಡಿನಲ್ಲೊಂದು ಕಲ್ಲು

ಯಥಾಪ್ರಕಾರ ವಾರ್ಷಿಕ "ಕಾಡಿನ" ತೀರ್ಥಯಾತ್ರೆಗೆ ಹೊರಟಾಗ,
ಬಾಲು ಈ ಬಾರಿ ನಿಮಗೆ ಒಂದು ಅಪರೂಪದ ಕಲ್ಲು ತೋರಿಸ್ತೀನಿ ಅಂತ ಅಂದ್ರು ,
ನಂಗೆ ತುಂಬಾ ಕುತೂಹಲ !!
ಹೋಗ್ತೀರೋದು ಕಗ್ಗಾಡಿಗೆ.. ಅಲ್ಲಿ ಈ ಅಸಾಮಿ ಏನು ತೋರಿಸ್ತಾರೋ ಏನೋ ಅಂತ !

ಬುರುಡೆ ಅರಣ್ಯದಿಂದ ಬೆಳಗ್ಗೆನೆ ಹೊರಟೆವು, ದಟ್ಟಾರಣ್ಯದ ದಾರಿ ಸವೆದು ಮೇಲೆಬಂದರೆ
ಅಲ್ಲೇ ಒಂದು ಬಿರ್ಲಾ ರವರ ಕಾಫಿ ಎಸ್ಟೇಟ್ ,
ಈ ಟಾಟಾ, ಬಿರ್ಲಾ ರವರು ಎಲ್ಲೆಲ್ಲೋ ಅಸ್ತಿ ಮಾಡಿ ಇಟ್ಟಿದ್ದಾರೆ ಮಾರಾಯ್ರೆ ,
ಎಸ್ಟೇಟ್ ದಾಟಿ ಹಾಗೆ ಮೇಲೆ ಬಂದರೆ ಸಿಗುವುದೇ ಹೊನ್ನಮೇಟಿ ಬೆಟ್ಟ.
ಏನಪ್ಪಾ ವಿಶೇಷ ಅಂದ್ರೆ, ಬೆಟ್ಟದ ಮೇಲೊಂದು ಏಕಶಿಲಾ ಕಲ್ಲು
ಕಲ್ಲನ್ನು ಜೋರಾಗಿ ಕುಟ್ಟಿದಾಗ ಹೊರ ಹೊಮ್ಮುತ್ತದೆ ಥರಾವರಿ ನಾದ ,
ನಿಸರ್ಗವೇ ಹಾಗೆ, ತನ್ನ ಗರ್ಭದಲ್ಲಿ ಎಷ್ಟೋ ಅಚ್ಚರಿಗಳನ್ನು ತುಂಬಿ ಕೊಂಡಿರುತ್ತದೆ ಅಲ್ವಾ?
ಇಲ್ಲಿ ನೋಡಿ , ದಟ್ಟಾರಣ್ಯ ಮಧ್ಯದಲ್ಲಿ ಒಂದು ನಿಸರ್ಗದ ವಿಸ್ಮಯ ,
ಹಾಗೆ ನೋಡಿದರೆ ಸುತ್ತ ಮುತ್ತಲೂ ಹಲವಾರು ಕಲ್ಲುಗಳಿವೆ , ಅವುಗಳಿಗೆ ಇಲ್ಲ ಈ ಭಾಗ್ಯ .

ಸೋಲಿಗರು ಈ ಕಲ್ಲಿನ್ನಲ್ಲಿ ಚಿನ್ನ ಇರುವುದೆಂದು ನಂಬಿರುತ್ತಾರೆ . ಸ್ಥಳ ಪುರಾಣದ ಪ್ರಕಾರ ಬಿಳಿಗಿರಿ ರಂಗನಾಥ ಸ್ವಾಮಿಯು ಮೆಟ್ಟಿದ್ದ ನೆಲವಾದ್ದರಿಂದ "ಹೊನ್ನ" "ಮೆಟ್ಟಿ" ಅಥವಾ "ಮೇಟಿ" ಎಂಬ ಹೆಸರು ಬಂದಿದೆ.
ಕಲ್ಲಿನ ಬಗ್ಗೆ ಯೋಚಿಸುತ್ತಿರುವಾಗ ,
ಹಂಪಿಯ ವಿಜಯ ವಿಠಲ ದೇವಸ್ಥಾನದ "ಸರಿಗಮಪ" ಕಂಬಗಳು ನೆನಪಿಗೆ ಬರುತ್ತವೆ
ಕಲ್ಲಿಗೆ ಹೇಗೆ ಬಂತು ಈ ಗುಣ ಎಂದು ಅಂತರ್ಜಾಲ ತಾಕಿಸಿದಾಗ ಸಿಕ್ಕಿದ್ದು ಇಷ್ಟು.
ಕೆಲವು ಬಗೆಯ "granite" ಗಳಿಗೆ ಈ ಗುಣ ಇರುತ್ತದೆಂದು ,
ಈ ಕಲ್ಲನ್ನು ಒಂದು ನಿರ್ದಿಷ್ಟ ಬಗೆಯಲ್ಲಿ ತಾಕಿಸಿದಾಗ , ತರಂಗಗಳು ಹೊರಹೊಮ್ಮುತ್ತದೆಂದು ತಿಳಿಯಿತು.
ಹೊನ್ನಮೇಟಿ ಎಸ್ಟೇಟ್ ತನಕ ದಿನವು ಒಂದು ಬಸ್ಸು ಬಂದು ಹೋಗುತ್ತದೆ,
ಬಾಕಿ ಕಲ್ಲಿನ ತನಕ ಚಾರಣ ಮಾಡಬೇಕು,
ಸ್ವಂತ ಗಾಡಿ ಇದ್ರೆ ಒಳ್ಳೇದು ,
ಸಾಧ್ಯವಾದರೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋದಾಗ ಇಲ್ಲಿಯೂ ಒಮ್ಮೆ ಭೇಟಿ ಕೊಡಿ.

10 comments:

 1. ಒಳ್ಳೆಯ ಮಾಹಿತಿ..ಹಾಗು ಚಂದದ ಬರವಣಿಗೆ...ಮನಸಿಗೆ ಮುದ ಕೊಡುವ ಶೈಲಿ..ತುಂಬಾ ಇಷ್ಟ ಆಯಿತು..
  ಈ ಜಾಗದ ಬಗ್ಗೆ ಮಾಹಿತಿ ನನಗೆ ತಿಳಿಸಿದರೆ ನಾನು ನಿಮಗೆ ಚಿರ ಋಣಿ
  srmanjun@gmai.com

  ReplyDelete
 2. Very informative... thanks for sharing sir :)

  ReplyDelete
 3. ಸರ್,
  ಉಪಯುಕ್ತ ಮಾಹಿತಿಗೆ ಧನ್ಯವಾದಗಳು. ಫೋಟೊಗಳು ಮತ್ತು ಅದರ ಬಗೆಗಿನ ನೇರ ವಿವರಣೆಗಳು ಚೆನ್ನಾಗಿವೆ...

  ReplyDelete
 4. @ ಶ್ರೀಕಾಂತ್ . @ ಮಾನಸ , @ ಶಿವು . ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು . ಹೀಗೆಯೇ ಪ್ರೋತ್ಸಾಹ ಇರಲಿ.

  @ ಶ್ರೀಕಾಂತ್ : ಇದು ಬಿಳಿಗಿರಿರಂಗನ ಬೆಟ್ಟದ ಹತ್ತಿರ ಇದೆ. ಹೇಳಿದ ಹಾಗೆ, ಎಸ್ಟೇಟ್ ತನಕ ಯಾವಾಗಲೋ ದಿನಕ್ಕೆ ಒಮ್ಮೆ ಬಸ್ಸು ಬಂದು ಹೋಗುತ್ತದೆ. ಸ್ವಂತ ಗಾಡಿ ಇದ್ದರೆ ಒಳ್ಳೆಯದು.

  ReplyDelete
 5. @ ಸೀತಾರಾಮ ಸರ್ , ಧನ್ಯವಾದಗಳು, ಹೀಗೆಯೇ ಪ್ರೋತ್ಸಾಹ ಇರಲಿ.
  ನಿಮ್ಮದು ಗಣಿ ಇಲಾಖೆ ಅದ್ದರಿಂದ ಒಂದು ಪ್ರಶ್ನೆ :-)
  ಎಲ್ಲ granite ಗಳು ಈ ರೀತಿ ಇರೋದಿಲ್ವ ಅಲ್ವಾ ? ನಮ್ಮ ಕರ್ನಾಟಕ ದಲ್ಲಿ ಈ ತರಹದ ಕಲ್ಲುಗಳು ದೊರೆತಿರುವದಕ್ಕೆ ಏನಾದ್ರು ಪುರಾವೆ ಗಳು ಇದೆಯಾ ?

  ReplyDelete
 6. nice photography and excellent information.

  ReplyDelete
 7. @ ಕೊಳಲು : ಪ್ರೋತ್ಸಾಹಕ್ಕೆ ಧನ್ಯವಾದಗಳು

  ReplyDelete
 8. ದೀಪ್ ರವರೆ, ನಾನು ನಿಮ್ಮ ಬ್ಲಾಗನ್ನು ಇತ್ತೀಚೆಗಷ್ಟೇ ಓದಿದ್ದು, ಬಹಳ ಚೆನ್ನಾಗಿ ಬರೆದಿದ್ದೀರ. ನಿಮಗೆ ನನ್ನ ಅಭಿನಂದನೆಗಳು.

  ನಾವು ನಮ್ಮ ಸ್ವಂತ ಗಾಡಿಯಲ್ಲಿ ಹೊನಮೇಟಿಗೆ ಹೋಗುವುದಾದರೆ, ಯಾವ ರಸ್ತೆಯಲ್ಲಿ ಹೋಗಬೇಕಾಗುತ್ತದೆ? ಆಲ್ಲಿ ತಂಗಲು ಯಾವುದಾದರು ಸ್ಠಳವಿದೆಯೇ?

  ReplyDelete
 9. @Hemmige..Dhanyavadagalu ..

  ಬಸ್ ವ್ಯವಸ್ಥೆ 'ಪುಂಜುರಿನ ತನಕ ಇರಬಹುದು.. ಅಲ್ಲಿಂದ ಬೇರೆ ವಾಹನ ಬೇಕು..

  ವಾಹನದಲ್ಲಿ ಹೋಗಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಬೇಕು..

  ReplyDelete