ಉದ್ಭವಿಸಿದೆ ಮಹಾ ಸ್ಫೋಟದಲ್ಲಿ
ಸ್ಫೋಟಿಸಿತು ಜೀವ ಸಂಕುಲವು ನನ್ನ ಗರ್ಭದಿಂದ
ಹೊತ್ತೆ, ಹೆತ್ತೆ, ಹಲವಾರು ಮಕ್ಕಳನ್ನು
ಬಲಶಾಲಿಗಳನ್ನ... ಒಂದೊಂದೂ... ಮುತ್ತು
ಬಲಶಾಲಿಗಳನ್ನ... ಒಂದೊಂದೂ... ಮುತ್ತು
ದಾರಿಯನ್ನು ಸವೆಸದೆ, ಹೋದವು ಹತ್ತು ಹಲವು ಸತ್ತು....
ಇತ್ತೊಂದು ನನ್ನಲ್ಲಿ ಅದಮ್ಯ ಆಸೆ
ಒಂದು ಚೇತನಕ್ಕೆ
ಒಂದು ಚೇತನಕ್ಕೆ
ಎರೆದೆ ನನ್ನದೆಲ್ಲವನ್ನು ಧಾರೆ
ಒಂದು ಬೀಜಕ್ಕೆ
ಒಂದು ಬೀಜಕ್ಕೆ
ಇಟ್ಟೆ ಅದನ್ನು ಜೀವಸಂಕುಲದ ತುತ್ತ ತುದಿಯಲ್ಲಿ
ಎಲ್ಲರನು ಪೊರೆಯಲಿ ಎಂದು ...
ಆಯಿತು ನಾ ಕಂಡ ಭರವಸೆ ಹುಸಿ
ಹೊರಟಿದ್ದಾನೆ ಸಂಕುಲದ ನಿರ್ನಾಮಕ್ಕೆಂದು
ಹಾಕುತ್ತಿರುವನು ನನ್ನ ಗರ್ಭಕ್ಕೆ ಕೈಯನ್ನು
ಸಾಕಾಗಿದೆ ನನಗಿನ್ನು;
ಇಲ್ಲ ತಾಳ್ಮೆ
ಇಲ್ಲ ತಾಳ್ಮೆ
ಕಾಯುತಿರುವೆನು ದಾರಿ
ಮತ್ತೊಂದು ಮಹಾಸ್ಫೋಟ ಎಂದು?
ಮತ್ತೊಂದು ಮಹಾಸ್ಫೋಟ ಎಂದು?
ಭೂ ತಾಯಿಯ ಅಳಲನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದೀರ.
ReplyDeleteಬದರಿಯವರೆ, ಧನ್ಯವಾದಗಳು. ಪ್ರೋತ್ಸಾಹ ಹೀಗೆ ಇರಲಿ.
Deleteಕ್ಷಮಯಾ ಧರಿತ್ರಿ ಎಂದು ಹೆಸರಾಗಿರುವ ಧರಿತ್ರಿಯನ್ನು ಬಗೆ ಬಗೆದು ದೋಚಿ ಹಾಳು ಮಾಡುತ್ತಿರುವ ಈ ಮನುಜರಿಗೆ ಬಡಿದೆಬ್ಬಿಸುವ ಪಾಠದಂತಿದೆ ಈ ಕವಿತೆಗಳ ಸಾಲು..ಸುಂದರ..
ReplyDeleteಶ್ರೀಕಾಂತ್, ಹೌದು ಬದಿದೆಬ್ಬಿಸಲೇ ಬೇಕು ಈ ಮನುಜಗೆ .. ಧನ್ಯವಾದಗಳು .. ಪ್ರೋತ್ಸಾಹದ ನುಡಿಗಳಿಗೆ.
Delete
ReplyDeleteಖಂಡಿತಾ , ಇಂದು ನಡೆಯುತ್ತಿರುವ ಥರ ಥರದ ಲೂಟಿಗಳನ್ನ ನೋಡ್ತಾ ಇದ್ರೆ
ಧರಿತ್ರಿಯ ಮೌನ ಮಹಾ ಆಸ್ಪೋಟದ ಮುನ್ನಿನ ಮಹಾ ಮೌನವೇನೋ ಅನಿಸತ್ತೆ
@Swarna .. ಅಹುದು.. ಇದು ಮಹಾ ಮೌನವೆ ... ಸರಿ ..
Deleteಅಲ್ಲಲ್ಲಿ ಆಗುವ ಬರ ... ಪ್ರವಾಹಗಳು ಮುನ್ಸೂಚನೆ ಅಂತ ಅನ್ನಿಸುತ್ತೆ
ಧನ್ಯವಾದಗಳು
hi
ReplyDelete