Monday, November 05, 2012

ಮಂಥನ!

ಮಥಿಸಬೇಕು ಅಂತರಂಗ 
ಕಟ್ಟುವುದು ಆಗಲೇ ಅಲ್ಲವೇ ಕೆನೆ 
ನಂತರ ಮಾತ್ರವೇ ಮೊಸರು -ಬೆಣ್ಣೆ 
ಮಥಿಸಿದಾಗಲೇ ಕ್ಷೀರ ಸಾಗರ
ಉಗಮಿಸಿಹುದು ಹಾಲು - ಹಾಲಾಹಲ
ಉಳಿಯೇಟಿನಿಂದಲೇ ಮೂರುತಿ
ಆಗುವುದು ಸುಂದರ, ಪಡೆವುದು ಕೀರುತಿ
ನಿರಂತರ ಮಂಥನವೀ  ಜೀವನ
ಸಿಗುವುದಿಲ್ಲಿ ದಿನವೂ ಹಾಲು - ಹಾಲಾಹಲ! 

3 comments:

  1. ಸುಂದರ ಕವಿತೆ ದೀಪಕ್ ಚೆನ್ನಾಗಿಬಂದಿದೆ. ಮತ್ತಷ್ಟು ಬರಲಿ ನಿಮ್ಮ ಬ್ಲಾಗಿನಲ್ಲಿ ಓದಲು ನಾವಿದ್ದೇವೆ.

    ReplyDelete
  2. ಉತ್ತಮ ವಿಚಾರಗಳು ತುಂಬಿವೆ. ಖುಷಿಯಾಯಿತು.

    ಯಾವ ಪದಗಳು, ಲಯ, ಶೈಲಿ ಯಾರ ಸ್ವತ್ತೂ ಅಲ್ಲ. ನಿಮ್ಮ ಗಟ್ಟಿತನ ನಿಮಗೆ ವರವಾಗಲಿ.

    ReplyDelete
  3. ಬಾಲು ಸರ್ ಬದರಿ ಸರ್ ಧನ್ಯವಾದಗಳು.. ಪ್ರೋತ್ಸಾಹದ ನುಡಿಗಳಿಗೆ... ಬರುತ್ತಿರಿ

    ReplyDelete