Thursday, October 13, 2011

ಕಾಡುವ ಕಹಿ ನೆನಪುಗಳು

ಓಡಿ ಹೋಗಲೇ ನಾನು?
ಕಹಿ ನೆನಪು ಗಳಿಂದ ದೂರ ದೂರ
ಬೆನ್ನಟ್ಟಿ ಹಿಂಬಾಲಿಸಿ , ಘೀಳಿಟ್ಟು
ಮಾಡುವವಿವು ಕೂರಂಬುಗಳಿಂದ ಗದಾಪ್ರಹಾರ

ಏನು ಮಾಡಲಿ ನಾನು ?
ನನ್ನ ಮನಸ್ಸಿದು ಮೃದುಭಾಷಿಣಿ
ಇದಕ್ಕಿಲ್ಲ ರಕ್ಷಣೆ ಕೋಟೆ ಕೊತ್ತಳಗಳಿಂದ
ಇರುವುದೊಂದು ಬೇಲಿ , ಅದೂ ಪಾಳು

ಮರೆತು ಬಿಡಲೇ ನಾನು ಎಲ್ಲ ?
ಮಾಡಬೇಕಾಗಿದೆ ನಾನು ಜೋಪಾನ
ಈ ನನ್ನ ಭಾವವನ್ನು
ಅದರಲ್ಲಿರುವ ಪಸೆ ಆರಿ ಹೋಗುವ ಮುನ್ನ

9 comments:

  1. ದೀಪಕ್;ಚೆಂದದ ಕವನ.ಪ್ರಯತ್ನ ಮುಂದುವರಿಸಿ.ಮತ್ತಷ್ಟು ಒಳ್ಳೆಯ ಕವನಗಳು ಬರಲಿ.ಅಭಿನಂದನೆಗಳು.

    ReplyDelete
  2. ಕವನ ಸುಂದರವಾಗಿದೆ. ಆದರೆ ಏನದು ಕಹಿ ನೆನಪು? ಏನಾಯಿತು?

    ReplyDelete
  3. ದೀಪು ಕವಿತೆ ಸೂಪರ್ , ನೋವಿನ ನೆನಪುಗಳ ಕವಿತೆಗೆ ಅಕ್ಷರದ ಬೇಲಿ ಹಾಕಿದ್ದೀರಿ!!!!! ಸುಮನ ಕೇಳಿದಂತೆ ನಾನು ಕೇಳುತ್ತೇನೆ. ಅದ್ಸರಿ ಏನದು ಕಹಿ ನೆನಪು ????? ಯಾರಿಂದ ಆ ಕಹಿ ನೆನಪು ???? ಅದು ಸಿಹಿಯಾಗಲು ಸುಮನ ಏನು ಮಾಡಬೇಕು ???? ಉತ್ತರಿಸದಿದ್ದರೆ ವಿಕ್ರಮಾದಿತ್ಯನ ಕಥೆ ಗೊತ್ತಲ್ಲಾ !!!!

    ReplyDelete
  4. @Dr. @Sum @ Balu sir. Thank you.


    Enn Enenoo Agilla..

    Dr bareda Kavyadinda Spoorthi bantu ashte :-)

    ReplyDelete
  5. ದೀಪ್
    ಓಡಿ ಹೋಗಲೇ ಇದೊಂದು ಮನಸಿನ ಪಲಾಯನ ಭಾವ ಎನ್ನುವುದನ್ನು ಬಹಳ ಚನ್ನಾಗಿ ಕವನಿಸಿದ್ದೀರಿ...ನೆನಪಿನ ಭಾವ... ಪಸೆ ಆರಿಹೋಗುವ ಮುನ್ನ -ಈ ಪ್ರಯೋಗ ಸ್ವಾರಸ್ಯಕರ...

    ReplyDelete
  6. ನೋವಿನ ಭಾವದಿ೦ದು೦ಟಾದ ಅರ್ಥಪೂರ್ಣ ಕವನ ದೀಪ್, ಶೀಘ್ರವೇ ನಲಿವಿನ ಭಾವವೂ ಕವನ ರೂಪ ತಾಳಲಿ. ಅಭಿನ೦ದನೆಗಳು.

    ReplyDelete
  7. @ Azad Sir, @ Prabhamani Madam
    ಧನ್ಯವಾದ. ತಮ್ಮ ಪ್ರೋತ್ಸಾಹದಿಂದ ಅದೂ ಸಾಧ್ಯವಾಗಲಿ

    ReplyDelete
  8. ಸಾರ್! ನೀವು ಕನ್ನಡದಲ್ಲೂ ಕೂಡ ಬರೆಯೋಕೆ ಶುರು ಮಾಡಿದೀರಂತ ನಂಗೆ ಗೊತ್ತೇ ಇರ್ಲಿಲ್ಲ. ನಿಮ್ಮ ಲೇಖನಗಳನ್ನ, ಕವಿತೆಗಳನ್ನ ಓದಿ ಖುಷಿ ಆಯ್ತು. ಹೀಗೇ ಮುಂದುವರೆಸಿ. ಗುಡ್ ಲಕ್ :)

    ReplyDelete
  9. Anatha: Tumba Thanks

    ReplyDelete