Saturday, July 16, 2011

ಎಂಥಾ ಗೋಳಾಟ

ಶಾಲಾ ದಿನಗಳು ಆವು .. ರಜಾ ದಿನಗಳಲ್ಲಿ ಊರಿಗೆ ಹೋಗೋ ಸಡಗರ ಹೇಳತೀರದು ...
ಊರಿಗೆ ಹೋದಮೇಲೆ ಕೇಳ್ತೀರಾ.. ಸಂಜೆವರೆಗೂ ಆಟ .. ಆಮೇಲೆ ಶ್ಲೋಕ ... ಕಥೆ .. ಹಾಡು .. ಹಸೆ ಇತ್ಯಾದಿ..
ಹೀಗೆ ನಮ್ಮಕ್ಕಂದಿರು ಹೇಳಿಕೊಟ್ಟಂತ ಒಂದು ಹಾಡು.. ಆಗಲೇ ಚನ್ನಾಗಿ ಕಂಠಪಾಠ ಮಾಡಿದ್ದೆ..
ಸ್ಕೂಲಿನಲ್ಲಿ ಅಂತು ಇದು "world famous" ಆಗಿತ್ತು ... "once more once more" ಅಂತ ಹಾಡಿಸುತ್ತಿದ್ದರು.
ಇದನ್ನು ನಾನು ಆಗಿನ ಕಾಲಕ್ಕೆ ಭದ್ರಾವತಿಯ ಆಕಾಶವಾಣಿ ಕೇಂದ್ರದಲ್ಲೂ ಹಾಡಿದ್ದೆ...
ಹೀಗೆ ಕೂತಾಗ ಹಾಡು ಜ್ಞಾಪಕಕ್ಕೆ ಬಂತು.. ಅಲ್ಲಲ್ಲಿ ಮರೆತು ಹೋಗಿತ್ತು
ಅಪ್ಪ ಹಾಗು ಅತ್ತೆಯ ತಲೆ ತಿಂದು ಇಲ್ಲಿ ಬರೆದಿದ್ದೀನಿ ..
ಇದನ್ನು ಬರೆದವರು ಯಾರು ಅಂತ ಗೊತ್ತಿಲ್ಲ .. ಗೊತ್ತಿದ್ದರೆ ತಿಳಿಸಿ ..


"
ಎಂಥಾ ಗೋಳಾಟ ಇದು ಎಂಥಾ ಗೋಳಾಟ
ಶನಿವಾರ ಮುಂಜಾನೆ ಶಾಲೆಗೆ ಹೋಗೋದು
ಎಂಥ ಗೋಳಾಟ ಇದು ಎಂಥಾ ಗೋಳಾಟ

ಕಣ್ಣ ತುಂಬಾ ನಿದ್ದೆ ಇದ್ದರು , ಆರಕೆ ನಾನೆದ್ದೆ
ಮೋರೆ ತೊಳೆಯಲು ಬಚ್ಚಲಿಗೋದೆ, ಅಲ್ಲೇ ಜಾರಿ ಬಿದ್ದೆ , ಅಲ್ಲೇ ಜಾರಿ ಬಿದ್ದೆ
ಹಾಯ್ ಹಾಯ್ ಹಾಯ್ , ದೇವರೇ ಕಾಯ್
ಮೈ ಕೈ ಎಲ್ಲ ಗಾಯ್ ಗಾಯ್ ಗಾಯ್
ತಂಬಿಗೆ ಬಿದ್ದು ತಾಯಿಯು ಬಂದು
ಉದ್ಧಾರಾದೆ ನಾನು....
ಎಂಥಾ ಗೋಳಾಟ ......

ಬಿಸಿ ಬಿಸಿ ಉಪ್ಪಿಟ್ ಮುಂದೆ ಬಂದರು
ಹೇಗೋ ನಾ ತಿಂದೆ
ಗಬ ಗಬ ತಿನ್ನಲು ಗಂಟಲಿಗೇರಿ
ಕೂತಿತು ಕರಿಬೇವು ಕಡ್ಡಿ ,ಕೂತಿತು ಕರಿಬೇವು ಕಡ್ಡಿ
ಛೆ ಛೆ ಏನು ಅಸಹ್ಯ .. ಮೈ ಕೈ ಎಲ್ಲ ಮುಸುರೆ ಅಸಹ್ಯ್
ಅಣ್ಣನು ಬಂದು ಗುದ್ದಲು ನಂಗೆ .. ಬೇಡೆಂದು ಒಳಗೋದೆ ನಾನು ....
ಎಂಥಾ ಗೋಳಾಟ ......

ಸಾಡೆ ಸಾತು ಆಗೆಬಿಟ್ಟಿತು .. ಶಾಲೆಗೆ ಹೊತ್ತಾಯ್ತು ..
ಗಡಿಬಿಡಿಯಿಂದ ಹೊರಟೆ ಬಿಟ್ಟೆ .. ಪೆನ್ನೇ ಮರೆತುಹೋಯ್ತು .. ಪೆನ್ನೇ ಮರೆತುಹೋಯ್ತು ..
ಟ್ರಿನ್ ಟ್ರಿನ್ ಟ್ರಿನ್, ಪೊಂ ಪೊಂ ಪೊಂ
ಸೈಕಲ್ ಮೋಟರ್ ಸೊಯ್ ಸೊಯ್ ಸೊಯ್
ಅತ್ತಿಂದಿತ್ತ ಓಡೋದರ ಒಳಗೆ ಕಿತ್ತಿತು ಚಪ್ಪಲ್ ಬಾರು
ಎಂಥಾ ಗೋಳಾಟ ......

ಅಂತು ಶಾಲೆಗೆ ಬಂದೆ .. ಟೀಚರ್ ಸಾರಿ ಎಂದೆ
ಓದುವ ಸರದಿ ಬಂದಿತು ಎಂದು, ಬ್ಯಾಗಿನ ಬಾಯ್ ತೆರೆದೇ .. ಬ್ಯಾಗಿನ ಬಾಯ್ ತೆರೆದೇ ..
ಛಿ . .. ಛಿ .... ಛಿ .... ಏನು ಅಸಹ್ಯ...
ಬ್ಯಾಗಿನ ತುಂಬಾ ತುಂಬಿದೆಯೂ
ತಂಗಿಯ ಕುಂಚಿಗೆ .. ತಮ್ಮನ ಟೊಪ್ಪಿಗೆ ....
ನನ್ನ ಚಪ್ಪಲ್ ಬಾರು .....
ಎಂಥಾ ಗೋಳಾಟ ......

"

ಅಂದಹಾಗೆ ಈ ಹಾಡನ್ನು ಜಾನಿ ವಾಲ್ಕರ್ ರವರ "Tel Malish " ಚಿತ್ರದ "ಸರ್ ಜೋ ತೇರ ಚಕ್ರಯೇ " ಹಾಡಿನ ಧಾಟಿಯಲ್ಲಿ ಹಾಡಬೇಕು

5 comments:

  1. ಎಂಥಾ ಗೋಳಾಟ ......! ಟೀಚರ್ ಆಗಿದ್ದಾಗಲೂ ನನಗೆ ಶನಿವಾರ ಮಾರ್ನಿ೦ಗ್ ಕ್ಲಾಸ್ ಅ೦ದ್ರೇ ಆತ೦ಕ ಆಗ್ತಾ ಇತ್ತು ! ಸಧ್ಯ , ಆಫೀಸ್ ಗೆ ಬ೦ದ ಮೇಲೆ ಈಗ ಮಾರ್ನಿ೦ಗ್ ಕ್ಲಾಸ್ ತೊ೦ದರೆ ಇಲ್ಲ! ನಿಮ್ಮ ಶಿಶುಗೀತೆ ಚೆನ್ನಾಗಿದೆ. ಅಭಿನ೦ದನೆಗಳು.

    ReplyDelete
  2. Thank you Madam.. Barta iri...

    ReplyDelete
  3. ದೀಪ್ ಚನ್ನಾಗಿದೆ "ಎಂಥಾ ಗೋಳಾಟ" ಜಾನಿವಾಕರ್ ಕ್ಲಾಸಿಕ್ ಕಮೆಡಿಯನ್ ನಮ್ಮ ನರಸಿಂಹರಾಜು ತರಹ...ಹೌದು ಹಾಡ್ಕೋ ಬಹುದು...ನನ್ನದೂ ಕೆಲವು ಇಂತಹವೇ ಪ್ರಯತ್ನಗಳಿವೆ ನೋಡಿ...
    www.jalanayana.blogspot.com
    ಮತ್ತು
    www.bhavamanthana.blogspot.com
    ನಲ್ಲಿ

    ReplyDelete
  4. ಜಾನಿವಾಕರ್ ಹಾಡಿನ ಉತ್ತಮ ಅಣಕವಾಡು. ಒಳ್ಳೆಯ ಬರವಣಿಗೆ.

    ನನ್ನ ಬ್ಲಾಗಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com

    ReplyDelete
  5. Azad Sir, @ Badarinath

    Tumba Dhanyavadagalu

    ReplyDelete