ಬಾಲಣ್ಣ ಹೇಳಿದ್ರು.. ದೊಡ್ಡ ಸಂಪಿಗೆ... ಇದು ನೀವು , ಒಮ್ಮೆ ನೋಡಲೇ ಬೇಕಾದ ಸಂಗತಿ ಅಂತ..
ತುಂಬಾ ದೊಡ್ಡ ಮರ ಅಂತೆ.. ಸಾವಿರಾರು ವರ್ಷ ಹಳೆಯದಂತೆ..
ಜಮದಗ್ನಿ ತಪಸ್ಸು ಮಾಡಿದ್ದನಂತೆ...
ಮುಗಿಲು ಮುಟ್ಟುವ ಹಾಗೆ ಮರ ಇದೆಯಂತೆ..
ಮರದಲ್ಲಿ ೩ ತರಹದ ಹೂವುಗಳು ಬಿಡ್ತಾವಂತೆ...
ಅಂತೆ ಕಂತೆ ಗಳ ಸರಮಾಲೆಗಳು ತಲೆಯಲ್ಲಿ ಇದ್ದವು...
ನಿಂತೆ ಮರದ ಮುಂದೆ.. ಅಲ್ಲ... ಅಲ್ಲ.. ಹೆಮ್ಮರದ ಮುಂದೆ..
ಅಬ್ಬಾ .. ಏನು ಅಗಾಧ, ಎಷ್ಟು ಎತ್ತರ .......ಭಾರೀ ವಿಸ್ತೀರ್ಣ...
ಸರಿ ಸುಮಾರು ಇಪ್ಪತ್ತು ಆಳುಗಳು ಬೇಕು... ಮರವನ್ನು ಸುತ್ತುವರಿಯಲಿಕ್ಕೆ..
ಮರದ ಕೆಳಗೆ ಸಣ್ಣ ಬಿಂದುವಾದೆ ... ಕುಬ್ಜನಾದೆ ... ಕಳೆದುಹೋದೆ ...
ಸೋಲಿಗರು ಇಂದಿಗೂ ಮರವನ್ನು ಪೂಜಿಸುತ್ತಾರೆ..
ಸೋಲಿಗರ ಆರಾಧ್ಯ ದೈವ ದೊಡ್ಡ ಸಂಪಿಗೆ..
ಗೊರುಕನ ಹಾಡು ಶುರುವಾಗುವುದೇ ದೊಡ್ಡ ಸಂಪಿಗೆಯ ಸ್ತುತಿಯಿಂದ ..
ಮರದ ಕೆಳೆಗೆ ಹಲವಾರು ಲಿಂಗಗಳು .. ತ್ರಿಶೂಲಗಳು ಇವೆ..
ಪೂಜೆ ಪುನಸ್ಕಾರಗಳು ಇಂದಿಗೂ ನಡೆಯುತ್ತವೆ..
ಅಲ್ಲಿಯೇ ಪಕ್ಕದಲ್ಲಿ ಭಾರ್ಗವಿ... ಜುಳು ಜುಳು ಎಂದು ಮಂದಗಮನೆ ಯಾಗಿ ಹರಿಯುತ್ತಿದ್ದಾಳೆ..
ಅಕ್ಕ, ಪಕ್ಕ ಪಕ್ಷಿಗಳ ಕಲರವ, ಮನಸ್ಸಿಗೆ ಮುದ ಕೊಟ್ಟಿತು ...
ಮನಸ್ಸು ನಿಸರ್ಗದ ಸೃಷ್ಟಿಗೆ ಒಂದು ದೊಡ್ಡ ಥ್ಯಾಂಕ್ಸ್ ಹೇಳುತ್ತಾ... ಹಾಡನ್ನು ಗುನುಗುನಿಸುತ್ತ ....ಅಲ್ಲಿಂದ ಹೊರಟೆ .
"ಸಂಪಿಗೆ ಮರದ ಚಿಗುರೆಲೆ ನಡುವೆ ಕೋಗಿಲೆ ಹಾಡಿತ್ತು.......
ಅದ ಕೇಳಿ ನಾ ಮೈ ಮರೆತೇ...
ಸ್ವರ ಒಂದು ಆಗಲೇ ಕಲಿತೆ...
ನಾ ಹಾಡಿದೆ.. ಈ ಕವಿತೆ.. ನಾ ಹಾಡಿದೆ ಈ ಕವಿತೆ..... "ಕೆಲವು ಸಂಗತಿಗಳು:
ದೊಡ್ದಸಂಪಿಗೆ ಮರವು ಬಿಳಿಗಿರಿ ರಂಗನ ಬೆಟ್ಟ ಹಾಗು ಕೆ. ಗುಡಿ (ಕ್ಯಾತ ದೇವನ ಗುಡಿ) ಮಾರ್ಗ ಮಧ್ಯದಲ್ಲಿ ಬರುತ್ತದೆ. ಇಲ್ಲಿಗೆ ತಲುಪಲು ಅರಣ್ಯ ಇಲಾಖೆಯ ಅನುಮತಿ ಅತ್ಯಗತ್ಯ.
ATREE, ಬೆಂಗಳೂರು ; ಇವರ ಇತ್ತೀಚಿನ ಸಂಶೋಧನೆಯ ಪ್ರಕಾರ ಮರವು ಸುಮಾರು ೨೭೦೦ ವರುಷಗಳಷ್ಟು ಹಳೆಯದು ಎಂದು ಕಂಡು ಹಿಡಿದ್ದಾರೆ
ಮರವು ಸುಮಾರು ೩೪ ಮೀಟರ್ ನಷ್ಟು ಎತ್ತರ ಹಾಗು ೨೦ ಮೀಟರ್ ನಷ್ಟು ಪರಿಧಿ ಹೊಂದಿದೆ. (ಆಧಾರ : ಇಂಟರ್ನೆಟ್ )
ಇದು ದೊಡ್ಡ ಸಂಪಿಗೆ ಅನ್ನುವುದಕಿಂತ ದೇವಸಂಪಿಗೆ ಅನ್ನಬಹುದು
ReplyDeleteದೀಪಕ್...
ReplyDeleteಇಷ್ಟು ಹಳೆಯದಾದ ಮರ !! ಅಬ್ಭಾ !!
ನಿಜಕ್ಕೂ ಪೂಜೆಗೆ ಯೋಗ್ಯ...
ಉಪಯುಕ್ತ ಮಾಹಿತಿ.. ಧನ್ಯವಾದಗಳು...
@ಸಂದೀಪ್: ಧನ್ಯವಾದಗಳು
ReplyDelete@prakash: ಹೌದು ಸರ್ .. ಕಾಲಚಕ್ರದ ಎಷ್ಟೋ ಘಟ್ಟಗಳಿಗೆ ಮರವು ಸಾಕ್ಷಿ ಆಗಿರಬಹುದು ಅಲ್ವೇ ..
೨೭೦೦ ವರ್ಷ... ಬಹಳ ಅಪರೂಪ..!!
ReplyDeleteನಿಮ್ಮವ,
ರಾಘು.
ದೀಪು ಮಾಹಿತಿ ಚೆನ್ನಾಗಿದೆ.ಅಲ್ಲಿರುವ ನದಿ ರೇಣುಕೆ ಅಲ್ಲಾ ಅದು ಭಾರ್ಗವಿ.
ReplyDeleteಬಾಲು ಧನ್ಯವಾದ .. ಸರಿಪಡಿಸಿದ್ದೇನೆ
ReplyDelete@ರಾಘು: ಧನ್ಯವಾದಗಳು
ReplyDeleteಅಬ್ಬಾ! ಎಷ್ಟು ಅಗಾಧವಾದ ಮರ, ಉತ್ತಮ ಮಾಹಿತಿ ನೀಡಿದ್ದೀರಿ ದೀಪು, ಧನ್ಯವಾದಗಳು.
ReplyDeletewow, nodalebeku
ReplyDeleteinformationge thanks
@guru @prabhamani dhanyavadagalu :-)
ReplyDeleteಬಿಳಿಗಿರಿರಂಗನ ಬೆಟ್ಟದಲ್ಲಿ ನಾಗರಿಕತೆ ಬೆಳೆಯೋಕೆ ಮೊದಲು ಸುಂದರ ಯುವತಿಯರನ್ನ ಪ್ರೀತಿಯನ್ನ ನಿವೇದಿಸಿಕೊಳ್ಳಲು ದೊಡ್ಡ ಸಂಪಿಗೆ ಮರದ ಹೂ ತಂದಕೊಟ್ಟರೆ ಮಾತ್ರ ಓಪ್ಪಿಕೊಳ್ತಾಇದ್ದರಂತೆ ಆ ಮರಕ್ಕೆ ಹತ್ತಬೇಕೆಂದರೆಗುಂಡಿಗೆ ಗಟ್ಟಿ ಇರುವ ಗಂಡಸಿಗೆ ಮಾತ್ರ ಸಾದ್ಯವಾಗ್ತಾ ಇತ್ತಂತೆ ಕಾರಮಕ್ಕ ಪುಸ್ತಕದಲ್ಲಿ ಗುರುವೆಗೌಡ ತನ್ನ ಹೆಂಡತಿಯನ್ನ ಪ್ರಪೋಸ್ ಮಾಡಿದ ರೀತಿ ಹೆಳ್ತಾನೆ ನಿಜಕ್ಕೂ ಅಮೇಜಿಂಗ್ ಕಣ್ರಿ
ReplyDeleteಬಿಳಿಗಿರಿರಂಗನ ಬೆಟ್ಟದಲ್ಲಿ ನಾಗರಿಕತೆ ಬೆಳೆಯೋಕೆ ಮೊದಲು ಸುಂದರ ಯುವತಿಯರನ್ನ ಪ್ರೀತಿಯನ್ನ ನಿವೇದಿಸಿಕೊಳ್ಳಲು ದೊಡ್ಡ ಸಂಪಿಗೆ ಮರದ ಹೂ ತಂದಕೊಟ್ಟರೆ ಮಾತ್ರ ಓಪ್ಪಿಕೊಳ್ತಾಇದ್ದರಂತೆ ಆ ಮರಕ್ಕೆ ಹತ್ತಬೇಕೆಂದರೆಗುಂಡಿಗೆ ಗಟ್ಟಿ ಇರುವ ಗಂಡಸಿಗೆ ಮಾತ್ರ ಸಾದ್ಯವಾಗ್ತಾ ಇತ್ತಂತೆ ಕಾರಮಕ್ಕ ಪುಸ್ತಕದಲ್ಲಿ ಗುರುವೆಗೌಡ ತನ್ನ ಹೆಂಡತಿಯನ್ನ ಪ್ರಪೋಸ್ ಮಾಡಿದ ರೀತಿ ಹೆಳ್ತಾನೆ ನಿಜಕ್ಕೂ ಅಮೇಜಿಂಗ್ ಕಣ್ರಿ
ReplyDelete