Sunday, March 27, 2011

ಮ್ಯಾಚ್ ಫಿಕ್ಸಿಂಗ್

ಮುನ್ನುಡಿ : ಕ್ರಿಕೆಟ್ ಬಗ್ಗೆ ಬರೀತಾ ಇದ್ದೀನಿ ಅಂತ ಅಂದುಕೊಂಡ್ರ! ಖಂಡಿತ ಇಲ್ಲ.... ಒಂದು ಘಟನೆ ಮುಂದೆ ಇಡುತ್ತಿದ್ದೇನೆ .........

ಮನೆಯಲ್ಲಿ ಯಾಕೋ ಇವತ್ತು ಪಿರಿಪಿರಿ ತುಂಬಾ ಜಾಸ್ತಿ,
ಒಂದು ವಿಷಯಕ್ಕೆ ಅಪ್ಪ ಮತ್ತು ನನ್ನ ಮಧ್ಯ ವಾದ ವಿವಾದ ನಡೆದಿತ್ತು.

"ಅಲ್ಲ, ನನ್ನ ಮಾತು ನೀವು ಯಾಕೆ ಕೇಳೋಲ್ಲ ಅಂತೀನಿ,
ಮೊನ್ನೆ ತಾನೇ ಆಪರೇಷನ್ ಆಗಿದೆ, ನಾಡಿದ್ದು ಪೂಜೆ ಮಾಡಬೇಕು ಅಂತೀರಾ,
ಮೊದ್ಲೇ ಶುಗರ್ರು, ಬಿಪಿ ಜಾಸ್ತಿಯಾಗಿದೆ ಈ ಸಂದರ್ಭದಲ್ಲಿ ಇವೆಲ್ಲ ಬೇಕಿತ್ತಾ ಅಂತ......
ಪಾಂಕ್ತವಾಗಿ ಮಾಡೋದು ಏನು ಬೇಡ .. "

"ನೀನು ಸುಮ್ಮನೆ ಇರಯ್ಯ , ನಂಗೆ ತಿಳುವಳಿಕೆ ಹೇಳೋಕ್ಕೆ ಬರಬೇಡ,
ಕಳೆದ ೬೦ ವರ್ಷ ದಿಂದ ಮಾಡ್ತಾ ಬಂದಿದ್ದೀನಿ,
ಅದು ಹ್ಯಾಗೆ ಬಿಡೋಕೆ ಆಗತ್ತೆ , ನೀನೇನೋ ಸಣ್ಣದಾಗಿ ಮಾಡಿ ಮುಗಿಸು ಅಂತ ಇದ್ದೀಯ ..
ಅವೆಲ್ಲ ಆಗುಲ್ಲ ... ನಾನು ಮಾಡಿಯೇ ಸಿದ್ಧ .. ನೀನು ತೆಪ್ಪಗಿರು ..." ಅಂತ ಕಡ್ಡಿ ಮುರಿದ ಹಾಗೆ ಹೇಳಿ ಬಿಟ್ರು....

ಆಫೀಸ್ಗೆ ರಂಪ ಮಾಡ್ಕೊಂಡು ಹೊರಟೆ...
ಹೋಗ್ತಾ ಒಂದು ಯೋಚನೆ ಬಂತು ಕಣ್ಣಿನ ಡಾಕ್ಟರಗೆ ಫೋನಾಯಿಸಿದೆ ...
ಡಾಕ್ಟರ ನಿಭಾಯಿಸೋಣ ಬಿಡಿ .. ಏನೂ ಯೋಚನೆ ಮಾಡಬೇಡಿ ಅಂತ ಹೇಳಿದ್ಮೇಲೆ ಮನಸ್ಸು ಸ್ವಲ್ಪ ನಿರಾಳ ಆಯ್ತು.
ಆಫೀಸ್ ಮುಗಿಸಿ ಮನೆಗೆ ಬಂದೆ. ಅಪ್ಪ ಹಾಲಲ್ಲಿ ಕೂತಿದ್ರು,
ಬೆಳಗಿನ ಸಿಟ್ಟು ಇನ್ನೂ ಮುಖದಲ್ಲಿ ರಾರಾಜಿಸುತ್ತಿತ್ತು
ಯಜಮಾನತಿಗೆ ಒಂದು ಲೋಟ ನೀರು ತರ ಹೇಳಿ ಕುಳಿತೆ

"ಡಾಕ್ಟರ ಫೋನ್ ಮಾಡಿದ್ರು, ಬೆಳಿಗ್ಗೆ, ಆರೋಗ್ಯ ವಿಚಾರಿಸಿಕೊಂಡರು"
" ಹು.... ಏನಂದ್ರು "
"ಇನ್ನೊಂದು ವಾರ ಫುಲ್ ರೆಸ್ಟ್ ಅಂತೆ , ಹೆಚ್ಚಿಗೆ ಆಯಾಸ ಮಾಡ್ಕೊಕ್ಬೇಡಿ ಅಂದ್ರು"
" ಹು.... ಸರಿ "
"ಹೆಚ್ಚು ತ್ರಾಸು ಬೇಡಾಂತ.. "
"ಹು .... ಈಗ "
" ಸ್ವಲ್ಪ ಸಣ್ಣದಾಗಿ ಮಾಡಿ ಮುಗಿಸ್ತೀನಿ "
ಡಾಕ್ಟರಗೆ ಮನದಲ್ಲಿಯೇ ವಂದನೆ ಹೇಳಿ ಗಟಗಟನೆಂದು ನೀರು ಕುಡಿದೆ.

9 comments:

  1. ದೀಪಕ್;ನಿಮ್ಮ ಮ್ಯಾಚ್ ಫಿಕ್ಸಿಂಗ್ ಸಖತ್ತಾಗಿದೆ!

    ReplyDelete
  2. ಧನ್ಯವಾದಗಳು ಡಾಕ್ಟ್ರೆ...

    ReplyDelete
  3. ದೀಪಕ್ ಈ ಥರದ ಮ್ಯಾಚ್ ಪಿಕ್ಸಿಂಗ್ ನನಗೂ ಇಷ್ಟ,,,ಮತ್ತೆ ಮತ್ತೆ ಬೇಕಾದ್ರೂ ಮಾಡ್ತೀನಿ...ಒಳ್ಲೆ ..ಬೇಸ್ತು...ಎಲ್ಲಾ ಕ್ರಿಕೆಟ್ ಅಂದ್ಕೊಂಡ್ರೆ...

    ReplyDelete
  4. @ಜಲನಯನ: ಪರಿಸ್ಥಿತಿಯ ಮೇಲೆ ಕೆಲವೊಮ್ಮೆ ಅನಿವಾರ್ಯ ಕೂಡ ಆಗಿ ಬಿಡುತ್ತೆ ಅಲ್ವಾ?
    ಧನ್ಯವಾದಗಳು

    ReplyDelete
  5. @Girish: Dhanavadagalu

    ReplyDelete
  6. ಸರ್,
    ಇದು ಖಂಡಿತ ಖತರ್‍ನಾಕ್ ಮ್ಯಾಚ್ ಫಿಕ್ಸಿಂಗ್!

    ReplyDelete
  7. @ ಶಿವು ಧನ್ಯವಾದಗಳು , ಭೇಟಿ ಕೊಡ್ತಾ ಇರಿ, ನಿಮ್ಮ ಪ್ರೋತ್ಸಾಹ ಇರಲಿ.

    @ ಸತೀಶ್ : ಧನ್ಯವಾದ, ನಿಮ್ಮನ್ನು ಪ್ರಕಾಶ್ ಅವರ ಪುಸ್ತಕ ಬಿಡುಗಡೆ ಸಮಾರಂಭ ದಲ್ಲಿ ಭೇಟಿಮಾಡಿ ಕುಶಿ ಆಯಿತು.

    ReplyDelete